Sunday, March 22, 2009

ಹೀಗೊಂದು ಪ್ರವಾಸದ ನೆನಪು

ರೋಹಿಣಿಯ ಗಲಾಟೆ ಹೆಚ್ಚಾಗಿತ್ತು. ಒಂದು ನಾಲ್ಕು ದಿನ ಬೆಂಗಳೂರಿನಿಂದ ಎಲ್ಲಾದರೂ ಹೊರಗೆ ಹೋಗಿಬರೋಣ ಎಂದು ಹಟ ಹಿಡಿದಿದ್ದಳು. ನನ್ನ ಕೆಲಸವೇ ಹಾಗಿದೆ. ಎಷ್ಟೋ ಸಲ ಎಲ್ಲಾ ತಯಾರಿ ಮಾಡಿಕೊಂಡು ಕೊನೆ ನಿಮಿಷದಲ್ಲಿ ರದ್ದಾದ ಪ್ರವಾಸಗಳೂ ಉಂಟು. ಆಗೆಲ್ಲಾ ರೋಹಿ ಮುಖ ಸಪ್ಪಗೆ ಮಾಡಿಕೊಂಡುಬಿಡುತ್ತಿದ್ದಳು. ಅವಳನ್ನು ಮತ್ತೆ ಮೂಡಿಗೆ ತರಲು ಸಾಕುಬೇಕಾಗುತ್ತಿತ್ತು. ಅವಳೂ ಪಾಪ ಒಳ್ಳೆಯವಳೇ. ಮದುವೆಯಾದಾಗಿಂದ ನನ್ನ ಹುಚ್ಚಾಟಗಳನ್ನೆಲ್ಲಾ ಸಹಿಸಿಕೊಂಡು ಬಂದಿದ್ದಾಳೆ. ಪ್ರವಾಸವೆಂದರೆ ಬಹಳ ಆಸೆ ಪಡುತ್ತಾಳೆ. ನನ್ನದೋ ಬಗೆಹರಿಯದ ತಾಪತ್ರಯ.

ಈ ಸಲ ರೋಹಿಣಿಗೆ ಅಮ್ಮನೂ ಒತ್ತಾಸೆಯಾಗಿ ನಿಂತಿದ್ದರು. ‘ಮದುವೆಯಾದ ಹೊಸದರಲ್ಲಿ ಹೊರಗೆ ಸುತ್ತದೆ ಮುಂದೆ ಮುದುಕರಾದ ಮೇಲೆ ಹೋಗ್ತೀರಾ? ಮಕ್ಕಳು-ಮರಿ ಅಂತ ಆದ್ರೆ ಅಷ್ಟೆ. ಸಂಸಾರದ ಜಂಜಡದಲ್ಲಿ ಸಿಕ್ಕುಬೀಳ್ತೀರಿ. ಈಗಲೇ ಎಲ್ಲಾದರೂ ಹೋಗಿಬನ್ನಿ’ ಎಂದು ಅಮ್ಮನ ದನಿಯೂ ಜೋರಾದ ಮೇಲೆ ನಾನು ಆ ಬಗ್ಗೆ ಯೋಚಿಸತೊಡಗಿದೆ. ಅಮ್ಮನ ಮಾತಿನಲ್ಲಿಯೂ ಸತ್ಯವಿತ್ತು. ಮಕ್ಕಳಾಗದಂತೆ ನಾವೇ ಇಷ್ಟು ದಿನ ಮುಂದೂಡಿಕೊಂಡು ಬಂದಿದ್ದೆವು. ಇನ್ನೆಷ್ಟು ದಿನ ಅಂತ? ಅಷ್ಟರಲ್ಲಿ ಎಲ್ಲಾದರೂ ಹೋಗಿಬರೋಣವೆಂದು ನನಗೂ ಅನ್ನಿಸಿತು. ಪ್ರಯಾಣಕ್ಕೆ ಎಲ್ಲಾ ವ್ಯವಸ್ಥೆ ಮಾಡಿದ್ದೆ. ರೋಹಿಣಿಗೆ ವಿಷಯ ತಿಳಿಸಿ ಸರ್‌ಪ್ರೈಸ್ ಮಾಡುವುದೊಂದು ಬಾಕಿ ಇತ್ತು.


ರಾತ್ರಿ ಊಟ ಮುಗಿಸಿ, ಮನಸ್ಸಿನಲ್ಲೇ ಪ್ರಯಾಣದ ಬಗ್ಗೆ, ಮಾಡದೆ ಉಳಿಸಿರುವ ಆಫೀಸಿನ ಕೆಲಸದ ಬಗ್ಗೆ ಲೆಕ್ಕಾಚಾರ ಹಾಕುತ್ತಾ ದಿಂಬಿಗೊರಗಿ ಕುಳಿತಿದ್ದೆ. ರೋಹಿ ಅಡುಗೆಮನೆಯ ಕೆಲಸ ಮುಗಿಸಿ ಬಂದಳು. ರೂಮಿನ ಬಾಗಿಲು ಹಾಕಿ ಬಂದು ಬದಿಯಲ್ಲಿ ಕುಳಿತವಳು - ‘ಏನು ನನ್ನ ರಾಯರು ಶೃಂಗಾರ ಶಯ್ಯೆಯ ಮೇಲೆ ಕೂತು ಅದೇನು ಯೋಚಿಸುತ್ತಿದ್ದಾರೆ’ ಎಂದು ನನ್ನ ಕೆನ್ನೆ ಹಿಂಡಿದಳು. ಅವಳ ಕಣ್ಣುಗಳಲ್ಲಿ ಇಣುಕುತಿದ್ದ ತುಂಟತನವನ್ನು ನೋಡಿ ನನಗೂ ಕೀಟಲೆ ಮಾಡಬೇಕೆನ್ನಿಸಿತು.........


(ಮುಂದುವರೆಯಲಿದೆ....)

Thursday, January 15, 2009

ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರ ಹೋಯಿ

ಹಳೆ ಪಾತ್ರೆ ಹಳೆ ಕಬ್ಬಿಣ
ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ
ಬಲು ಬೇಜಾರ್ ಕಣೋ ಹೋಯಿ

ಚಂದಿರನ ತೂಕಕೆ ಇಡು
ಸಂಜೆಯನು ಸೇಲಿಗೆ ಬಿಡು
ಬೂಮಿನ ಬಾಡಿಗೆ ಕೊಡು
ಸಾಕುಲೋಕವ ಮೂಟೆ ಕಟ್ಟು
ಬಾರಲೇ ಸೈಕಲ್ ಹತ್ತು
ಲೋಕವ ಮೂಟೆ ಕಟ್ಟು
ಯಾತಕೆ ದೂಸರಾ ಮಾತು?
ಎಲ್ಲಾ ಟೈಂ ವೇಸ್ಟ್


ನೋಡು ಮುಂಗಾರು ಮಳೆ
ಅದರೊಳಗೆ ಹೇಳವ್ರೆ
ಈ ಪ್ರೀತಿ ಎಂದೂ ಅತಿ
ಮದುರ ತ್ಯಾಗ ಅಮರ
ಬೇಡುವೆನು ಓ ಚಿನ್ನ
ಮಾಡಿ ಬಿಡು ತ್ಯಾಗಾನ
ನಿಂತು ಬಿಡು ಜೋಗದ ಗುಂಡೀಲಿ
ಬಿಟ್ಟು ಬಿಡು ಈ ನನ್ನ
ಹಳೆ ಹುಡುಗಿ ಹೆಸರೇ ತೆಗೆಯದಲೇ
ನಿನ್ನ ಮುಂದೆ ಸಾಚಾ
ಆಗಿರುವೆ ದಿನ ರಾತ್ರಿ
ನಿನ್ನ ಮನೆಗೆ ಬರುವೆನು
ನಾ ಕೊನೆಯವರೆಗೂ